ಮಹಾಶ್ವಾನ
ಆಕಾಶದ 88 ನಕ್ಷತ್ರ ಪುಂಜಗಳ ಪೈಕಿ ಪ್ರಧಾನವೂ ಸುಪ್ರಸಿದ್ಧವೂ ಆದ ನಕ್ಷತ್ರಪುಂಜ (ಕ್ಯಾನಿಸ್ ಮೇಜರ್). ಮಹಾವ್ಯಾಧ (ಒರೈಯನ್) ಪುಂಜದ ಒತ್ತಿಗೆ ಆಗ್ನೇಯಕ್ಕಿದೆ. ಮಹಾಶ್ವಾನ ವಿಷುವದ್ವøತ್ತದ ದಕ್ಷಿಣಕ್ಕೆ ಸುಮಾರು 100 ಯಿಂದ 300 ವರೆಗೆ ವ್ಯಾಪಿಸಿದೆ. ಸನ್ನಿಹಿತ ವಿಷುವದಂಶ 7 ಗಂಟೆ. ಮಾನೋಸಿರೋಸ್ (ಏಕಶೃಂಗಿ), ಪಪ್ಪೀಸ್ (ನೌಕಾವೃತ್ತ). ಕೊಲಂಬ (ಕಪೋತ), ಲೀಪಸ್ (ಶಶ), ಮಹಾವ್ಯಾಧ ಪುಂಜಗಳು ಇದನ್ನು ಸುತ್ತುವರಿದಿವೆ. ಈ ಪುಂಜದ ಪ್ರಮುಖ ಹಾಗೂ ಜಾಜ್ಜ್ವಲ್ಯಯುತ ನಕ್ಷತ್ರ ಲುಬ್ಧಕ  (ಸಿರಿಯಸ್), ಪೂರ್ವ ಶ್ವಾನ (ಪ್ರೋಸಿಯಾನ್) ಮತ್ತು  ಆದ್ರ್ರಾ (ಬೀಟ್ಲ್‍ಜೂಸ್) ನಕ್ಷತ್ರಗಳನ್ನು ಸೇರಿಸುವ  ರೇಖೆಯ ನಡುಬಿಂದುವಿನ ದಕ್ಷಿಣಕ್ಕೆ  ಲುಬ್ಧಕ ಇದೆ. ಇದರ ಕಾಂತಿಮಾನ-1.42. ನಾಲ್ಕನೆಯ  ಕಾಂತಿಮಾನದಕ್ಕಿಂತಲೂ ಉಜ್ಜ್ವಲವಾದ ನಕ್ಷತ್ರಗಳು ಅದರ (1.48), ವೇಜಿóಯ(1.85), ಮಿರ್‍ಜಾóಮ್ (1.96), ಆಲುಡ್ರ (2.46). 02 (3.02), ಫುರಾದ್ (1.85), ಡೆಲ್ಟಾ ( (3.68), ಪೈ Ψ (3.78) ಮತ್ತು ಒಮೇಗಾ ((3.83). ಇವುಗಳ ಪೈಕಿ ವೇಜಿóಯ, ಆಲುಡ್ರ ಮತ್ತು ಒಮಿಕ್ರಾಸ್ 02 ನಕ್ಷತ್ರಗಳ ಉಜ್ಜ್ವಲತೆ ಅಧಿಕ-ಸೂರ್ಯನದರ 50,000 ಪಟ್ಟು ಹೆಚ್ಚು. ಇವುಗಳೊಂದಿಗೆ ಲುಬ್ಧಕವನ್ನು ಹೋಲಿಸಿದರೆ ಅದು ಅತ್ಯಂತ ಮಂದಪ್ರಕಾಶ ಬೀರುವಂಥದ್ದಾಗುತ್ತದೆ. ಈ ನಕ್ಷತ್ರಪುಂಜದ UW ಅ(ಚಿ  ಎಂಬುದು ಗ್ರಹಣಕಾರಕ ಯಮಳತಾರೆ. ಅವಧಿ 4.4 ದಿವಸಗಳು. ಎರಡೂ ಘಟಕಗಳೂ 0 ಪ್ರರೂಪದವು. ಐದನೆಯ ಕಾಂತಿಮಾನಕ್ಕೆ ಮೇಲ್ಪಟ್ಟ ಎರಡು ನಕ್ಷತ್ರಗಳು ಈ ಪುಂಜದಲ್ಲಿವೆ; ಃoss 8694 ಮತ್ತು ಃoss 9836. ಚರಕಾಂತಿಯ ನಕ್ಷತ್ರಗಳು ಖ ಮತ್ತ ತಿ. ಇವಲ್ಲದೆ ತಾರಾಗುಚ್ಚಗಳೂ ನೀಹಾರಿಕೆಗಳೂ ಇವೆ.
ಮಹಾಶ್ವಾನ ಮತ್ತು ಮಹಾವ್ಯಾಧ ನಕ್ಷತ್ರಪುಂಜಗಳನ್ನು ಕುರಿತಂತೆ ಈಜಿಪ್ಟ್ ಗ್ರೀಕ್ ಪುರಾಣಗಳಲ್ಲೂ ಹಿಂದೂ ಪುರಾಣಗಳಲ್ಲೂ ಹಲವಾರು ಕಥೆಗಳು ಇವೆ. ವಿವರಗಳಿಗೆ-
(ನೋಡಿ- ಒರೈಯನ್) 
(ನೋಡಿ- ಲುಬ್ಧಕ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ